ರಾಜ್ಯದಲ್ಲಿ ಪ್ರತಿಯೊಬ್ಬರು ಶಾಂತಿ, ಸುವ್ಯವಸ್ಥೆಯಿಂದ ಬದುಕುವ ಕರ್ನಾಟಕ ನನ್ನದಾಗಬೇಕು' ಎಂದು ಶಿಕಾರಿಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್ ಕೆ.ಸಿ. ರಾಜಾವತ್ ಹೇಳಿದರು. 25 ವರ್ಷದ ವಿನಯ್ ಕೆ.ಸಿ. ರಾಜಾವತ್ ಶಿಕಾರಿಪುರ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯೆಡಿಯೂರಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಳಿದಿದ್ದಾರೆ.